ಏಪ್ರಿಲ್ ೨ - ಏಪ್ರಿಲ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೯೨ನೇ ದಿನ (ಅಧಿಕ ವರ್ಷದಲ್ಲಿ ೯೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೭೩ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೭೫೫ - ಕಮಡೋರ್ ವಿಲಿಯಮ್ ಜೇಮ್ಸ್, ಕೊಂಕಣದ ಹತ್ತಿರದ ಸುವರ್ಣದುರ್ಗವನ್ನು ವಶಪಡಿಸಿಕೊಂಡ. ೧೯೩೦ - ಹೈಲ್ ಸಲಸ್ಸಿಯನ್ನು ಇಥಿಯೊಪಿಯದ ಚಕ್ರವರ್ತಿಯಾಗಿ ಘೋಷಿತವಾಯಿತು. ೧೯೮೨ - ಅರ್ಜೆಂಟೀನದ ಸೈನ್ಯೆಯು ಫಾಲ್ಕ್‍ಲ್ಯಾಂಡ್ಸ್ ಅನ್ನು ಆಕ್ರಮಿಸಿ ಫಾಲ್ಕ್‍ಲ್ಯಾಂಡ್ಸ್ ಯುದ್ಧದ ಪ್ರಾರಂಭವಾಯಿತು. ೧೯೮೪ - ಪ್ರಥಮ ಭಾರತೀಯ ಅಂತರಿಕ್ಷಯಾನಿಯಾದ ರಾಕೇಶ್ ಶರ್ಮನನ್ನು ಹೊಂದಿದ್ದ ಸೊಯುಜ್ ಟಿ-೧೧ ಉಡಾವಣೆಯಾಯಿತು. == ಜನನ == ೭೪೨ - ಯುರೋಪ್ನ ಚಕ್ರವರ್ತಿ ಚಾರ್ಲ್‍ಮೇನ್ ೧೭೮೧ - ಭಗವಾನ್ ಸ್ವಾಮಿನಾರಾಯಣ, ಹಿಂದೂ ಧರ್ಮದ ಸಂತ. ೧೮೦೫ - ಹಾನ್ಸ್ ಕ್ರಿಶ್ಚಿಯನ್ ಆಂಡರ್ಸನ್, ಡೆನ್ಮಾರ್ಕ್ನ ಕಥೆಗಾರ. == ನಿಧನ == ೧೮೭೨ - ಸ್ಯಾಮುಯೆಲ್ ಮೋರ್ಸ್, ಅಮೇರಿಕ ದೇಶದ ಟೆಲಿಗ್ರಾಫ್ನ ಸಂಶೋಧಕ. ೨೦೦೫ - ಪೋಪ್ ಎರಡನೇ ಜಾನ್ ಪಾಲ್. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ